Search This Blog

Sunday, November 21, 2010

ಬ್ಲಾಗ್ ಅಂದರೆ... (ಹಾಗೇ ಸುಮ್ನೆ..!)

ನಾನು ಅನ್ನೋದು ಅಜ್ಞಾನ
ನನ್ನದು ಅನ್ನೋದು ಅವಿವೇಕ
ನನ್ನಿಂದಲೇ ಅನ್ನೋದು ಅಹಂಕಾರ
ಇವುಗಳೆಲ್ಲದರ ಒಟ್ಟು ಮೊತ್ತ
ಈ ಬ್ಲಾಗ್!

ಕಿಟಕಿ, ಬಾಗಿಲುಗಳು ಬಿಗ್ಗ ಬಿಗಿಯಾಗಿ
ಮುಚ್ಚಿದ ಕೋಣೆಯಲ್ಲಿ
ಒಬ್ಬನೇ ಕೂತ್ಕೊಂಡು, ಅಪಾನ ವಾಯು ವಿಸರ್ಜಿಸಿ
ಅದನ್ನೇ ಆಘ್ರಾಣಿಸುತ್ತಾ, ಆನಂದ ಪಡೋ ಥರಾ
ಈ ಬ್ಲಾಗ್!

ಹೆಂಡತಿಯು ಊರಲ್ಲಿಲ್ಲದಾಗ
ಪಕ್ಕದ ಮನೆಯವಳ ಧೇನಿಸುತ್ತ
ಅವಳೊಡನೆ ಸುಖಿಸುವದನ್ನು ಕಲ್ಪಿಸಿಕೊಳ್ಳುತ್ತ
ಸ್ವ ಕುಚ ಮರ್ದಿಸಿಕೊಳ್ಳುವವನ ಕಳ್ಳ ಅಂತರಂಗ
ಈ ಬ್ಲಾಗ್!

2 comments:

  1. ಕವನದ ಕುರಿತು ಹೇಳುವುದೇನು? ಸುಂದರವಾಗಿದೆ. ವಾಸ್ತವಕ್ಕೆ ಹತ್ತಿರವಾಗಿದೆ. ಆದರೆ ನಿಮ್ಮೊಳಗಿನ ಕವಿ ಕಿಲಾಡಿಯೇ ಇರಬೇಕು. ಆತ ಹೊರಬರಲು ಬಾಗಿಲು ಅಲ್ಲಲ್ಲ...ಬ್ಲಾಗೇ ಬೇಕೇನು?

    ReplyDelete
  2. ಗುರುವೇ,ಪ್ರತಿಕ್ರಿಯೆಗೆ ಧನ್ಯವಾದ.

    ReplyDelete