Search This Blog

Sunday, November 21, 2010

ಬ್ಲಾಗ್ ಅಂದರೆ... (ಹಾಗೇ ಸುಮ್ನೆ..!)

ನಾನು ಅನ್ನೋದು ಅಜ್ಞಾನ
ನನ್ನದು ಅನ್ನೋದು ಅವಿವೇಕ
ನನ್ನಿಂದಲೇ ಅನ್ನೋದು ಅಹಂಕಾರ
ಇವುಗಳೆಲ್ಲದರ ಒಟ್ಟು ಮೊತ್ತ
ಈ ಬ್ಲಾಗ್!

ಕಿಟಕಿ, ಬಾಗಿಲುಗಳು ಬಿಗ್ಗ ಬಿಗಿಯಾಗಿ
ಮುಚ್ಚಿದ ಕೋಣೆಯಲ್ಲಿ
ಒಬ್ಬನೇ ಕೂತ್ಕೊಂಡು, ಅಪಾನ ವಾಯು ವಿಸರ್ಜಿಸಿ
ಅದನ್ನೇ ಆಘ್ರಾಣಿಸುತ್ತಾ, ಆನಂದ ಪಡೋ ಥರಾ
ಈ ಬ್ಲಾಗ್!

ಹೆಂಡತಿಯು ಊರಲ್ಲಿಲ್ಲದಾಗ
ಪಕ್ಕದ ಮನೆಯವಳ ಧೇನಿಸುತ್ತ
ಅವಳೊಡನೆ ಸುಖಿಸುವದನ್ನು ಕಲ್ಪಿಸಿಕೊಳ್ಳುತ್ತ
ಸ್ವ ಕುಚ ಮರ್ದಿಸಿಕೊಳ್ಳುವವನ ಕಳ್ಳ ಅಂತರಂಗ
ಈ ಬ್ಲಾಗ್!

Saturday, November 20, 2010

ಭಾವ ತಿಜೋರಿಯ ಬೀಗದ ಕೈ ಮತ್ತು ನಾನು

ತುಂಬ ದಿನಗಳ ಹಿಂದೆ
ತುಂಬ ಭಾವುಕನಾಗಿದ್ದೆ
ಆಗ ಅದೇ ಸರಿ ಅನ್ನಿಸಿತ್ತು
ಯಾಕಂದ್ರೆ, ಬದುಕು ತನ್ನ ಮುಖವನ್ನು ಅಷ್ಟೇ ತೋರಿಸಿತ್ತು

ಕೆಲವು ದಿನಗಳ ಹಿಂದೆ
ಭಾವುಕತೆ ಅರ್ಧದಷ್ಟಾಗಿತ್ತು
ಆಗ ಅದೇ ಸರಿ ಅನ್ನಿಸಿತ್ತು
ಯಾಕಂದ್ರೆ, ಬದುಕು ತನ್ನ ಮುಖವನ್ನು ಅಷ್ಟಷ್ಟೇ ತೋರಿಸತೊಡಗಿತ್ತು

ಇತ್ತೀಚಿನ ದಿನಗಳಲ್ಲಿ
ನಂಗೆ ಯಾವುದಕ್ಕೂ ಅಳುವೇ ಬರ್ತಿಲ್ಲ
ಯಾವುದಕ್ಕೂ ಖುಷಿಯೇ ಆಗ್ತಿಲ್ಲ
ಯಾವುದಕ್ಕೂ ವಿಷಾದ ಆಗ್ತಿಲ್ಲ

ಅಯ್ಯೋ, ಇದೇನಾಗಿಹೋಯ್ತು ನಂಗೆ?
ಅಂತ ತುಂಬ ತಲೆ ಕೆಡಿಸಿಕೊಂಡೆ
ಹೊಳೀಲಿಲ್ಲ, ಕೊನೆಗೆ ಥಟ್ಟನೆ ನೆನಪಾಯ್ತು
ಭಾವ ತಿಜೋರಿಯ ಬೀಗದ ಕೈ ಕಳೆದುಹೋಗಿದ್ದು!